ಬೆಂಗಳೂರು, ನ.11 (DaijiworldNews/HR): ಬುಟ್ಟಿಯಲ್ಲಿ ಹಾವಿದೆ ಬಿಡ್ತೀನೆಂದು ಯಾರಿಗೆ ಹೆದರಿಸ್ತಿದ್ದಾರೆ? ಧೈರ್ಯವಿದ್ರೆ ಬಿಡಲಿ ಎಂದು ಕಾಂಗ್ರೆಸ್ ವಿರುದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬಿಟ್ ಕಾಯಿನ್ ವಿಚಾರವಾಗಿ ಸರ್ಕಾರದ ಮೇಲೆ ಕಾಂಗ್ರೆಸ್ ಮಾಡ್ತಿರುವ ಆರೋಪಕ್ಕೆ ಕಿಡಿಕಾರಿದ ಗೃಹ ಸಚಿವ, "ಕಾಂಗ್ರೆಸ್ ಸರ್ಕಾರವಿದ್ದಾಗ ಶ್ರೀಕಿಯನ್ನ ಏಕೆ ಬಂಧಿಸಿರಲಿಲ್ಲ? ಬಿಜೆಪಿ ಅಧಿಕಾರಕ್ಕೆ ಬಂದಾಗ ಶ್ರೀಕೃಷ್ಣನನ್ನ ಬಂಧಿಸಲಾಗಿತ್ತು. ಇನ್ನು ಯುಬಿ ಸಿಟಿ ಗಲಾಟೆ ವೇಳೆ ಕಾಂಗ್ರೆಸ್ ನಾಯಕರ ಮಕ್ಕಳ ಜತೆ ಇದ್ದ. ಅಂದು ಅವರ ಮಕ್ಕಳು ಏಕೆ ಇದ್ರು ಅಂತ ಜನರ ಬಳಿ ಹೇಳಲಿ. ಅದು ಬಿಟ್ಟು ಈಗ ಅವರ ಬಳಿ ಏನೋ ಇದೆ ಅಂತಾ ಹೇಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬುಟ್ಟಿಯಲ್ಲಿ ಹಾವಿದೆ ಬಿಡ್ತೀನೆಂದು ಯಾರಿಗೆ ಹೆದರಿಸ್ತಿದ್ದಾರೆ? ಅವ್ರು ಹಾವು ಬಿಡಲಿ, ಎಷ್ಟು ದೊಡ್ಡದು? ಯಾರಿಗೆ ಕಚ್ಚುತ್ತದೆ? ಯಾರು ಸಾಯುತ್ತಾರೆ ಎಂದು ನೋಡೋಣಾ. ಅವರ ಬುಡದಲ್ಲೇ ಇದೆ ಅಂತಾ ಅವರು ಬಯಲಿಗೆ ತರುತ್ತಿಲ್ಲ ಎಂದು ಹೇಳಿದ್ದಾರೆ.