ಬೆಂಗಳೂರು, ನ 11 (DaijiworldNews/MS): ಟಿಪ್ಪು ಜಯಂತಿ ಪರವಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿರುವ ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ ಹಾಕುತ್ತೀರಿ ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವೂ "ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ತಲೆಗೆ ಟೋಪಿ ಹಾಕಿದಾಗ ಅಲ್ಪಸಂಖ್ಯಾತ, ಕಂಬಳಿ ಹೊದ್ದುಕೊಂಡರೆ ಒಂದು ಜಾತಿ, ಚುನಾವಣೆ ಬಂದಾಗ ನಾನೂ ಹಿಂದು. ಮುಖ್ಯಮಂತ್ರಿಯಾಗುವ ಆಸೆ ಬಂದಾಗ ದಲಿತ, ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ ಎಂದು ಕುಹಕವಾಡಿದೆ.
ಮೈಸೂರು ರಾಜರು, ಮಯೂರ, ಗಂಗರಸರು, ರಾಷ್ಟ್ರಕೂಟರು, ಹೊಯ್ಸಳರು ಮಠಮಂದಿರ ಕಟ್ಟಿ ನಾಡನ್ನು ಸುಭೀಕ್ಷವಾಗಿಟ್ಟಿದ್ದನ್ನು ಏಕೆ ಮರೆ ಮಾಚುವಿರಿ ಸಿದ್ದರಾಮಯ್ಯ? ಟಿಪ್ಪು ಜಯಂತಿಯನ್ನು ಜನ ತಿರಸ್ಕರಿಸಿದರೂ, ಮುಸ್ಲಿಂ ಸಮುದಾಯವೇ ಟಿಪ್ಪು ಜಯಂತಿಯ ಅಗತ್ಯವಿಲ್ಲವೆಂದರೂ ಟಿಪ್ಪುವನ್ನು ಆರಾಧಿಸುತ್ತಿರುವ ಮರ್ಮವೇನು? ಎಂದು ಪ್ರಶ್ನಿಸಿದೆ.