ಮುಂಬೈ, ನ 11 (DaijiworldNews/MS): ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಬಂಧನಕ್ಕೊಳಗಾಗಿದ್ದ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಈಗ ಜಾಮೀನಿನ ಮೇಲೆ ಹೊರಬಂದಿರುವ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ₹ 5 ಕೋಟಿ ನಷ್ಟ ಪರಿಹಾರಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ದೂರದರ್ಶನ ವಾಹಿನಿಯೊಂದರಲ್ಲಿ ಫಡ್ನವಿಸ್ ಹೇಳಿಕೆಯಿಂದಾಗಿ ಅವರ ಖ್ಯಾತಿಗೆ 'ಮಾನಸಿಕ ಹಿಂಸೆ, ಆರ್ಥಿಕ ನಷ್ಟ ಮತ್ತು ನೋವು' ಉಂಟಾಗಿದೆ ಎಂದು ಎಂದು ಸಮೀರ್ ಖಾನ್ ಆರೋಪಿಸಿದ್ದಾರೆ. ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಲೀಗಲ್ ನೊಟೀಸ್ ಪ್ರತಿಯನ್ನು ನವಾಬ್ ಮಲಿಕ್ ಮತ್ತು ಅವರ ಪುತ್ರಿ ನಿಲೋಫರ್ ಮಲಿಕ್ ಖಾನ್ ಅವರು ಲೀಗಲ್ ನೋಟಿಸ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಲೀಗಲ್ ನೋಟೀಸ್ ನಲ್ಲಿ " ಮಾದಕ ವಸ್ತುಗಳ ಅಕ್ರಮ ಸಂಗ್ರಹದಲ್ಲಿ ಸಮೀರ್ ಖಾನ್ ತೊಡಗಿದ್ದಾರೆ ಎಂದು ಫಡಣವೀಸ್ ಆರೋಪಿಸಿದ್ದಾರೆ. ಆದರೆ, ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಲ್ಲಿಸಿರುವ ಚಾರ್ಜ್ಶೀಟ್ ನಲ್ಲಿ ನೀಮ್ಮ ಒಂದೇ ಒಂದು ಆರೋಪವೂ ಸಹ ದಾಖಲಾಗಿಲ್ಲ. 2021ರ ಜನವರಿಯಲ್ಲಿ ಸಮೀರ್ ಖಾನ್ ಮನೆಯನ್ನು ಶೋಧಿಸಲಾಗಿದೆ. ಅವರ ಮನೆಯಲ್ಲಿ ಯಾವುದೇ ಅಕ್ರಮ ಹಾಗೂ ಸಂಶಯಾಸ್ಪದ ವಸ್ತು ಕಂಡುಬಂದಿಲ್ಲ. ಆದರೆ, ನೀವು(ಫಡಣವೀಸ್) ಯಾವ ಮೂಲಗಳಿಂದ ಇಂತಹ ಸುಳ್ಳು, ಕ್ಷುಲ್ಲಕ ಮತ್ತು ಆಧಾರರಹಿತ ವರದಿಯನ್ನು ಪಡೆದಿದ್ದೀರಿ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ" ಆರೋಪಿಸಲಾಗಿದೆ.
ಲೀಗಲ್ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ನವಾಬ್ ಮಲಿಕ್, "ಫಡಣವೀಸ್ ಅವರು ನಮ್ಮಲ್ಲಿ ಕ್ಷಮೆಯಾಚಿಸದಿದ್ದರೆ ನಾವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ" ಎಂದು ತಿಳಿಸಿದ್ದಾರೆ.