ನವದೆಹಲಿ, ನ.11 (DaijiworldNews/PY): 2014ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು, 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದ ನಟಿ ಕಂಗನಾ ರಣಾವತ್ ಅವರ ಹೇಳಿಕೆಯ ವಿರುದ್ದ ಬಿಜೆಪಿ ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, "ಇಂತಹ ಆಲೋಚನೆ ಹುಚ್ಚುತನವೇ ಅಥವಾ ದೇಶದ್ರೋಹವೋ?" ಎಂದು ಕೇಳಿದ್ದಾರೆ.
ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಅದು ಸ್ವಾತಂತ್ರ್ಯವಲ್ಲಿ, ಅದು ಭಿಕ್ಷೆ, ನಮಗೆ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿತು" ಎಂದಿದ್ದರು.
ಈ ಬಗ್ಗೆ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವರುಣ್ ಗಾಂಧಿ, "ಕೆಲವರು ಮಹಾತ್ಮ ಗಾಂಧಿ ಅವರ ತ್ಯಾಗವನ್ನು ಅವಮಾನಿಸುತ್ತಿದ್ದಾರೆ. ಕೆಲವೊಮ್ಮೆ ಅವರ ಹಂತಕರನ್ನು ಗೌರವಿಸುತ್ತಾರೆ. ಮಂಗಲ್ ಪಾಂಡೆ, ರಾಣಿ ಲಕ್ಷ್ಮೀ ಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಭೋಸ್ ಹಾಗೂ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅಪಮಾನವಾಗಿದೆ. ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯಬೇಕೆ?" ಎಂದು ಕೇಳಿದ್ದಾರೆ.