ಸೋನಿಪತ್, ನ 11 (DaijiworldNews/MS): ಹರ್ಯಾಣದ ಸೋನಿಪತ್ ಜಿಲ್ಲೆಯ ಹಲಾಲ್ಪುರ ಗ್ರಾಮದ ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರ ಸೂರಜ್ (18) ಅವರನ್ನು ಹತ್ಯೆ ಮಾಡಲಾಗಿದೆ ಅಂದಹಾಗೆ ಈ ಅಕಾಡೆಮಿ ಕ್ರಿಡಾಪಟು ಸುಶೀಲ್ ಕುಮಾರ್ ಅವರದಲ್ಲ.ಇದು ಸ್ಥಳೀಯರ ಮಾಲೀಕತ್ವದ್ದಾಗಿದೆ. ತರಬೇತುದಾರ ಪವನ್, ಅವರ ಸೋದರಳಿಯರಾದ ಸಚಿನ್ ಮತ್ತು ಹಲಾಲ್ಪುರದ ಅಮಿತ್ ಇವರೆಲ್ಲರೂ ಸೇರಿ ಐದರಿಂದ ಆರು ಸುತ್ತಿನ ಬುಲೆಟ್ಗಳನ್ನು ಹಾರಿಸಿ ರೆಸ್ಲರ್ ನಿಶಾ ಹಾಗೂ ಅವರ ಸಹೋದರನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತಯೇ ಅಕಾಡೆಮಿ ಮೇಲೆ ದಾಳಿ ಮಾಡಿದ ಸ್ಥಳೀಯ ಗ್ರಾಮಸ್ಥರು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ.
ನಿಶಾ ದಹಿಯಾ (21) ಆಕೆಯ ಸಹೋದರ ಸೂರಜ್
ಸೋನಿಪತ್ ಸಹಾಯಕ ಎಸ್ಪಿ ಮಯಾಂಕ್ ಗುಪ್ತಾ ಅವರು, ರೆಸ್ಲರ್ ನಿಶಾ ದಹಿಯಾ ಹಾಗೂ ಅವರ ಸಹೋದರ ಅವರ ಸಾವನ್ನು ಖಚಿತಪಡಿಸಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, . ಈ ಘಟನೆ ಬೆಳಕಿಗೆ ಬರುತ್ತಿದ್ದಂತಯೇ ಅಕಾಡೆಮಿ ಮೇಲೆ ದಾಳಿ ಮಾಡಿದ ಸ್ಥಳೀಯ ಗ್ರಾಮಸ್ಥರು ಸಿಟ್ಟಿಗೆದ್ದು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ.
ಹೆಸರಲ್ಲಿ ಗೊಂದಲ:
ಹರ್ಯಾಣದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ (23) ಹತ್ಯೆಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಈ ಸುದ್ಧಿ ಬಾರಿ ಸಂಚಲನ ಸೃಷ್ಟಿಸಿತ್ತು. ಆದರೆ ಮೃತಪಟ್ಟ ರೆಸ್ಲರ್ ಕೂಡಾ ನಿಶಾ ದಹಿಯಾ ಆಗಿದ್ದು, ಅವರು ವಿಶ್ವ ಚಾಂಪಿಯನ್ಶಿಪ್ಗೆ ಹೋಗಿರುವವರಲ್ಲ.
ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ
ಮಾಧ್ಯಮ ವರದಿಗಳನ್ನು ಗಮನಿಸಿದ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಿಶಾ ದಹಿಯಾ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಸುಳ್ಳು. ನನ್ನ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ನಾನು ಮತ್ತು ನನ್ನ ಕುಟುಂಬ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.