ನವದೆಹಲಿ, ನ.11 (DaijiworldNews/HR): ಕ್ಯಾನ್ಸರ್ನಿಂದ ಸಾವಿಗೀಡಾದ ಪತ್ನಿಯ ಅಂತ್ಯಸಂಸ್ಕಾರದ ಸಮಯದಲ್ಲೇ ಪತಿಯು ದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಘಟನೆ ನಡೆದಿದೆ.
ಕಣ್ಣಿನ ದೃಷ್ಟಿ ಇರದ ಕೇರಳದ ಲೇಖಕರಾದ ಬಾಲನ್ ಪುಥೇರಿಯವರು ನೂರಾರು ಪುಸ್ತಕಗಳನ್ನು ಬರೆದಿದ್ದು, ಅವರಿಗೆ ಅವರ ಪತ್ನಿ ಶಾಂತಾ ಬೆನ್ನೆಲುಬಾಗಿದ್ದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಾಂತಾ, ಆಸ್ಪತ್ರೆಗೆ ಸೇರಿದ್ದರಿಂದ ದೆಹಲಿಯಲ್ಲಿ ಬಾಲನ್ ಅವರು ಪ್ರಶಸ್ತಿ ಸ್ವೀಕರಿಸಲು ಕೆಲ ಸಮಯವಿದ್ದಾಗ ಸಾವನ್ನಪ್ಪಿದ್ದಾರೆ.
ಇನ್ನು ಈ ವಿಷಯ ತಿಳಿದು ಬಾಲನ್ ಅವರು ರಾಷ್ಟ್ರಪತಿ ಭವನದಲ್ಲಿದ್ದ ಬಾಲನ್ ಪ್ರಶಸ್ತಿ ಪಡೆದೇ ಕೇರಳಕ್ಕೆ ವಾಪಸಾಗಲು ನಿರ್ಧರಿಸಿದ್ದಾರೆ. ಭಾರವಾದ ಹೃದಯದಿಂದ ನಡುಗುವ ಕೈಯ್ಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಅದೇ ಸಮಯಕ್ಕೆ ಸರಿಯಾಗಿ ಮಲಪ್ಪುರಂನ ಕೊಂಡೊಟ್ಟಿಯಲ್ಲಿ ಪತ್ನಿಯ ಚಿತೆಗೆ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇತ್ತ ಚಿತೆ ಉರಿಯುತ್ತಿದ್ದಾಗಲೇ ಅತ್ತ ಅವರು ಪ್ರಶಸ್ತಿ ಸ್ವೀಕರಿಸುವಂತಾಗಿದೆ.