ಬೆಂಗಳೂರು, ನ.11 (DaijiworldNews/PY): "ದಕ್ಷಿಣ ಭಾರತಕ್ಕೆ ಕರ್ನಾಟಕ ಬಿಜೆಪಿಯ ಹೆಬ್ಬಾಗಿಲು. ಕೇರಳವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಕೇಸರಿ ಪಕ್ಷ ಭಿನ್ನವಾಗಿ ಕೆಲಸ ಮಾಡಬೇಕಾದ ಪರಿಣಾಮ ಬೀರಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿಯ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ದಕ್ಷಿಣವು ಬಿಜೆಪಿಗೆ ಭರವಸೆಯಾಗಿದೆ. ಕರ್ನಾಟಕ ಒಂದು ಹೆಬ್ಬಾಗಿಲು. ತಮಿಳುನಾಡು ಚುನಾವಣೆಯಲ್ಲಿ ಸೋತರೂ ಕೂಡಾ ಪ್ರಭಾವ ಬೀರಿದ್ದೇವೆ. ರಾಜಕೀಯ ಹಿನ್ನಡೆ ಇರುವ ರಾಜ್ಯ ಎಂದರೆ ಅದು ಕೇರಳ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದು, ವಿಭಿನ್ನವಾಗಿ ಕೆಲಸ ಮಾಡಬೇಕು" ಎಂದಿದ್ದಾರೆ.
"ಕಳೆದ 30 ವರ್ಷಗಳಿಂದ ದಕ್ಷಿಣದಲ್ಲಿ ಕೇಸರಿ ಬಣ್ಣವನ್ನು ಹರಡಲು ಬಿಜೆಪಿಯ ನಾಯಕರು ಶ್ರಮಿಸಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಆಕಸ್ಮಿಕವಾಗಿ ಬಂದಿಲ್ಲ. ವಿವಿಧ ರಂಗಗಳಲ್ಲಿ ಹಲವು ವರ್ಷಗಳಿಂದ ಕಠಿಣ ಶ್ರಮಪಟ್ಟ ಕಾರಣ ಬಂದಿದೆ" ಎಂದು ಹೇಳಿದ್ದಾರೆ.
"ಕರ್ನಾಟಕದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರಂತಹ ಹಲವಾರು ನಾಯಕರು ಶ್ರಮಿಸಿದ್ದಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ಬಿಜೆಪಿ ನಾಯಕರು ಚುನಾವಣಾ ಫಲಿತಾಂಶವನ್ನು ಲೆಕ್ಕಿಸದೇ ಶ್ರಮಿಸಿದ್ದಾರೆ. ಬದಲಾವಣೆಯ ಸಮಯ ಬಂದಾಗ ಬಿಜೆಪಿ ಆಯ್ಕೆಯಾಗುವುದು ಖಚಿತ" ಎಂದಿದ್ದಾರೆ.