ಶಿವಮೊಗ್ಗ, ನ. 10 (DaijiworldNews/SM): ಚಲಿಸುತ್ತಿದ್ದ ರೈಲಿನಿಂದ ಏಕಾಏಕಿ ಆಯತಪ್ಪಿ ಬಿದ್ದ ಮಹಿಳೆಯೋರ್ವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾರ ಘಟನೆ ಶಿವಮೊಗ್ಗ ನಗರದ ರೈಲ್ವೇ ನಿಲ್ದಾಣದಲ್ಲಿ ನವಂಬರ್ ೯ರ ಮಂಗಳವಾರದಂದು ನಡೆದಿದೆ.
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ನಿಲ್ದಾಣಕ್ಕೆ ಬೆಳಿಗ್ಗೆ 6.55 ಕ್ಕೆ ಆಗಮಿಸಿತ್ತು. 7.05 ಕ್ಕೆ ರೈಲು ಬೆಂಗಳೂರಿಗೆ ಹೊರಟಿತ್ತು. ಸಂಬಂಧಿಕರೋರ್ವರನ್ನು ರೈಲು ಹತ್ತಿಸಲು ಮಹಿಳೆ ಆಗಮಿಸಿದ್ದರು. ರೈಲು ಹೊರಡುತ್ತಿದ್ದಂತೆ ಗಾಬರಿಯಿಂದ ಮಹಿಳೆ ರೈಲಿನಿಂದ ಏಕಾಏಕಿ ಇಳಿಯಲು ಮುಂದಾಗಿದ್ದರು. ಇದರಿಂದಾಗಿ ಮಹಿಳೆ ಆಯತಪ್ಪಿ ರೈಲಿನಿಂದ ಆಯತಪ್ಪಿದ್ದಾರೆ.
ಫ್ಲ್ಯಾಟ್’ಫಾರಂಗೆ ಕಾಲಿಟ್ಟ ಮಹಿಳೆಯು, ಆಯತಪ್ಪಿ ಬೀಳುತ್ತಿದ್ದಂತೆ ಅಲ್ಲಿದ್ದ ರೈಲ್ವೆ ಪೊಲೀಸ್ ಇಲಾಖೆಯ ಅಣ್ಣಪ್ಪ, ಸಂತೋಷ್ ಕುಮಾರ್ ಬಿ.ಎಸ್. ಹಾಗೂ ಆರ್.ಪಿ.ಎಫ್. ಕಾನ್ಸ್’ಟೇಬಲ್ ಜಗದೀಶ್ ರವರು ರಕ್ಷಣೆ ಮಾಡಿದ್ದಾರೆ. ನಿಲ್ದಾಣದ ಸಿ. ಸಿ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸದ್ಯ ವೀಡಿಯೋ ವೈರಲ್ ಆಗುತ್ತಿದೆ.