ಬೆಂಗಳೂರು, ನ.10 (DaijiworldNews/PY): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಜೀವನ ಚರಿತ್ರೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ದೇವೇಗೌಡರ ಜೀವನ ಚರಿತ್ರೆಯನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ್ ಅವರು ರಚಿಸಿದ್ದು, ಪೆಂಗ್ವಿನ್ ಪ್ರಕಾಶನ ಪ್ರಕಟಿಸಲಿದೆ.
ಈ ಪುಸ್ತಕದಲ್ಲಿ ದೇವೇಗೌಡರ ಆರು ದಶಕಗಳ ರಾಜಕೀಯ ಜೀವನವನ್ನು ದಾಖಲಿಸಲಾಗಿದ್ದು, ಈ ಪುಸ್ತಕ 600 ಪುಟಗಳನ್ನು ಹೊಂದಿದೆ. ಈ ಗ್ರಂಥವನ್ನು ಆಕ್ಸ್ಫರ್ಡ್ ಪ್ರಾಧ್ಯಾಪಕರೂ ಕೂಡಾ ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೇಖಕ ಸುಗತ ಶ್ರೀನಿವಾಸರಾಜು ಅವರು, "ನಾನು ಈ ಪುಸ್ತಕವನ್ನು ಬರೆಯುವಾಗ, ದೇವೇಗೌಡರ ಜೀವನವು ಸ್ಥಳೀಯ ಹಾಗೂ ಸಾರ್ವತ್ರಿಕವಾದ ಒಂದು ಆಕರ್ಷಕವಾದ ಮಿಳಿತವಾಗಿ ಕಂಡಿದೆ" ಎಂದಿದ್ದಾರೆ.
ದೇವೇಗೌಡರ ಜೀವನ ಚರಿತ್ರೆ ಮುಗಿಸುವಾಗ ನನಗೆ ದೊರಕಿದ ಅಪಾರ ಅದೃಷ್ಟಕ್ಕೆ ನಾನು ಸಂತಸಪಟ್ಟೆ. ಈ ಪುಸ್ತಕದಲ್ಲಿ ದೇವೇಗೌಡರ ಶ್ರೀಮಂತ ಸಂಸದೀಯ ದಾಖಲೆ ಹಾಗೂ ಅವರ ರಾಜಕೀಯ ಜೀವನದ ಏಳುಬೀಳುಗಳ ಕುರಿತು ತಿಳಿದುಕೊಳ್ಳಲು ಹಲವು ಸಂದರ್ಶನ ನಡೆಸಿದ್ದಾಗಿ ಹೇಳಿದ್ದಾರೆ.