ಬಾಗಲಕೋಟೆ, ನ.09 (DaijiworldNews/HR): ಬಿಜೆಪಿ ಇಂದು ಒರಿಜಿನಲ್ ಬಿಜೆಪಿಯಾಗಿ ಉಳಿದಿಲ್ಲ ಅದೊಂದು ಕಲಬೆರಕೆ ಪಕ್ಷವಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ಇಂದು ಒರಿಜಿನಲ್ ಬಿಜೆಪಿಯಾಗಿ ಉಳಿದಿಲ್ಲ ಅದೊಂದು ಕಲಬೆರಿಕೆ ಪಕ್ಷವಾಗಿದ್ದು, ಇಂದು ಬಿಜೆಪಿಗೆ ಶೇ.60-70ರಷ್ಟು ಜನರು ಕಾಂಗ್ರೆಸ್, ಜೆಡಿಎಸ್ ನಿಂದ ಬಂದಿದ್ದಾರೆ" ಎಂದಿದ್ದಾರೆ.
ಇನ್ನು ಇಂದು ಶೇ.60-70ರಷ್ಟು ಜನರು ಬಿಜೆಪಿಗೆ ಇತರ ಪಕ್ಷದಿಂದ ಬಂದಿದ್ದು, ಶೇ.30-40 ಜನರು ಮಾತ್ರ ಬಿಜೆಪಿಯವರು ಪಕ್ಷದಲ್ಲಿದ್ದಾರೆ" ಎಂದು ಹೇಳಿದ್ದಾರೆ.