ಭೋಪಾಲ್,ನ.09 (DaijiworldNews/HR): "ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಜನರು ತಮ್ಮ ಜೇಬಿನಲ್ಲಿ ಇದ್ದಾರೆ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ್ ರಾವ್ ಅವರು ನೀಡಿರುವ ಹೇಳಿಕೆಗೆ ತಕ್ಷಣ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಮುರಳೀಧರ್ ರಾವ್ ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತನ್ನ ಕುರ್ತಾದ ಜೇಬಿನ ಕಡೆಗೆ ತೋರಿಸುತ್ತಾ, ನನ್ನ ಜೇಬಿನಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ಇದ್ದಾರೆಯೇ, ಹೆಚ್ಚಿನ ಕಾರ್ಯಕರ್ತರು ಮತ್ತು ವೋಟ್ ಬ್ಯಾಂಕ್ ಈ ವರ್ಗದವರಾಗಿದ್ದಾಗ ನೀವು (ಮಾಧ್ಯಮದವರು) ನಮ್ಮನ್ನು ಬ್ರಾಹ್ಮಣ ಮತ್ತು ಬನಿಯಾಗಳ ಪಕ್ಷ ಎಂದು ಕರೆದಿದ್ದೀರಿ ಎಂದಿದ್ದರು.
ಇನ್ನು ಕಾಂಗ್ರೆಸ್ ಪಕ್ಷವು ತನ್ನ ಹೇಳಿಕೆಯನ್ನು ತಿರುಚಿ ವಿವಾದ ಹುಟ್ಟು ಹಾಕುತ್ತಿದೆ ಎಂದು ರಾವ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವ್, "ನಮ್ಮ ಪಕ್ಷ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಸಿದ್ದಾಂತ ನಂಬಿದ್ದು, ಸತ್ಯಗಳು ಮತ್ತು ಹೇಳಿಕೆಗಳನ್ನು ವಿರೂಪಗೊಳಿಸುವುದು ಕಾಂಗ್ರೆಸ್ನ ಸಂಸ್ಕ್ರತಿ" ಎಂದು ಹೇಳಿದ್ದಾರೆ.