ನವದೆಹಲಿ, ನ. 08 (DaijiworldNews/SM): ಶೀಘ್ರದಲ್ಲೇ ಮಕ್ಕಳಿಗೆ ಲಸಿಕೆ ವಿತರಣೆಗೆ ಸರಕಾರ ಮುಂದಾಗಿದ್ದು, ಈ ನಡುವೆ ಔಷಧ ತಯಾರಿಕಾ ಕಂಪೆನಿ ಕೂಡ ಲಸಿಕೆ ಪೂರೈಕೆಗೆ ತುದಿಗಾಲಲ್ಲಿ ನಿಂತಿದೆ. ಝೈಡಸ್ ಕ್ಯಾಡಿಲಾ ಕಂಪೆನಿ ಅತಿ ಕಡಿಮೆ ದರದಲ್ಲಿ ಸರಕಾರಕ್ಕೆ ಒಂದು ಕೋಟ್ ಡೋಸ್ ಲಸಿಕೆ ಪೂರೈಕೆಗೆ ಮುಂದಾಗಿದೆ.
ಪ್ರತಿ ಡೋಸ್ ಗೆ 265 ರೂಪಾಯಿಗಳಂತೆ ವಿತರಿಸಲು ಸಿದ್ಧವಾಗಿದೆ. ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ ಇದಾಗಿದೆ. ಒಂದು ಕೋಟಿ ಡೋಸ್ ಗಳನ್ನು ಪೂರೈಕೆ ಮಾಡುವುದಕ್ಕೆ ಸರ್ಕಾರದಿಂದ ಆರ್ಡರ್ ಬಂದಿದೆ. ಸರ್ಕಾರಕ್ಕೆ ಪ್ರತಿ ಡೋಸ್ ಗೆ 265 ರೂಪಾಯಿ ಬೆಲೆಯಲ್ಲಿ ಪೂರೈಕೆ ಮಾಡಲಾಗುತ್ತಿದೆ. ಸೂಜಿ-ಮುಕ್ತ ಲೇಪಕವನ್ನು ಜಿಎಸ್ ಟಿ ರಹಿತವಾಗಿ ಪ್ರತಿ ಡೋಸ್ ಗೆ 93 ರೂಪಾಯಿಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಸಾಂಪ್ರದಾಯಿಕ ಸಿರೆಂಜ್ ಗಳ ಬದಲಾಗಿ ಸೂಜಿ ರಹಿತ ಅಪ್ಲಿಕೇಟರ್ ಗಳನ್ನು ಬಳಕೆ ಮಾಡಿ ಈ ಲಸಿಕೆಯನ್ನು ನೀಡಲಾಗುತ್ತದೆ. 28 ದಿನಗಳ ಮಧ್ಯಂತರದಲ್ಲಿ ಮೂರು ಡೋಸ್ಗಳನ್ನು ನೀಡಲಾಗುತ್ತದೆ.