ಕೋಲಾರ, ನ.08 (DaijiworldNews/HR): ಮಗುವೊಂದರ ಅಪಹರಣ ಪ್ರಕರಣದಲ್ಲಿ ಪೊಲೀಸ್ ವಿಚಾರಣೆಯ ಭಯಕ್ಕೆ ಹೆದರಿದ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಮಗುವೊಂದರ ಅಪರಹರಣ ಸಂಬಂಧ ಒಂದೇ ಕುಟುಂಬದ ಮುನಿಯಪ್ಪ ( 70), ನಾರಾಯಣಮ್ಮ ( 65 ), ಬಾಬು ( 45 ), ಪುಷ್ಪ (35) ಹಾಗೂ ಗಂಗೋತ್ರಿ (17) ಎಂಬುವರ ವಿರುದ್ಧ ಕೇಳಿ ಬಂದಿತ್ತು.
ಇನ್ನು ಇದೇ ವಿಚಾರದಲ್ಲಿ ಪೊಲೀಸರು ಕುಟುಂಬಸ್ಥರನ್ನು ವಿಚಾರಣೆಗೆ ಕೂಡ ಕರೆಯಲಿದ್ದಾರೆ ಎಂಬ ಮಾಹಿತಿಯಲ್ಲಿ, ಪೊಲೀಸ್ ವಿಚಾರಣೆಗೆ ಹೆದರಿದಂತ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.