ಲಖನೌ, ನ.08 (DaijiworldNews/HR): ಉತ್ತರ ಪ್ರದೇಶದಲ್ಲಿ ಝೀಕಾ ವೈರಸ್ ಉಲ್ಬಣಗೊಂಡಿದ್ದು 17 ಮಂದಿ ಮಕ್ಕಳು ಸೇರಿದಂತೆ 89 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ನೇಪಾಲ್ ಸಿಂಗ್ ಮಾಹಿತಿ ನೀಡಿದ್ದು, "ಝೀಕಾ ವೈರಾಣು ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು ಅದರ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆಯು ಹಲವು ತಂಡಗಳನ್ನು ರಚಿಸಿದೆ" ಎಂದಿದ್ದಾರೆ.
ಇನ್ನು ಅಷ್ಟು ಮಂದಿ ಝೀಕಾ ಸೋಂಕಿತರಲ್ಲಿ ಒಬ್ಬ ಗರ್ಭಿಣಿ ಮಹಿಳೆಯಿದ್ದು ಅವರ ಬಗ್ಗೆ ವಿಶೇಷ ಗಮನ ಹರಿಸಿದ್ದೇವೆ" ಎಂದೂ ಹೇಳಿದ್ದಾರೆ.