ಶ್ರೀನಗರ, ನ.08 (DaijiworldNews/PY): "ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಲಷ್ಕರ್-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನು ಸೋಮವಾರ ಬಂಧಿಸಿವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತ ಉಗ್ರನನ್ನು ಹಫೀಜ್ ಅಬ್ದುಲ್ಲಾ ಮಲಿಕ್ ಎಂದು ಗುರುತಿಸಲಾಗಿದೆ.
"ಈತ ದಿ ರೆಸಿಸ್ಟೆನ್ಸ್ ಫ್ರಂಟ್ನೊಂದಿಗೆ ಸಕ್ರಿಯವಾಗಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಪೊಲೀಸರು ಹಾಗೂ ಸೇನೆ ಅನಂತ್ನಾಗ್ನ ಅಶ್ಮುಕಮ್ ಪ್ರದೇಶದ ವಹಾದನ್ ಗ್ರಾಮದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಉಗ್ರನನ್ನು ಬಂಧಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರನ ಬಂಧನದ ಸಂದರ್ಭ ಆತನ ಬಳಿ ಇದ್ದ ಪಿಸ್ತೂಲ್ ಹಾಗೂ 7 ಸಜೀವ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಕಟ್ಸು ಅರಣ್ಯದಿಂದ 1 ಎಕೆ ರೈಫಲ್, 2 ಮ್ಯಾಗಜೀನ್ಗಳು ಹಾಗೂ 40 ಸಜೀವ ಗುಂಡುಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.