ನವದೆಹಲಿ, ನ 08 (DaijiworldNews/MS): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ, 94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಉಪ ಪ್ರಧಾನಿ ಎಲ್ಕೆ ಅಡ್ವಾಣಿಗೆ ಶುಭಕೋರಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಅಡ್ವಾನಿ ನಿವಾಸಕ್ಕೆ ಖುದ್ದಾಗಿ ತೆರಳಿ ಪ್ರಧಾನಿ ಅವರನ್ನು ಅಭಿನಂದಿಸಿದ್ದಾರೆ . ಪ್ರಧಾನಿಯೊಂದಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮುಂತಾದವರು ಶುಭ ಕೋರಿದ್ದಾರೆ.
ಹೂಗುಚ್ಚ ನೀಡಿ ಅಡ್ವಾಣಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಮೋದಿಬಳಿಕ ಅಡ್ವಾಣಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಅಡ್ವಾಣಿ ನಿವಾಸದಲ್ಲಿ ಕೇಕ್ ಕತ್ತರಿಸಿ ಬರ್ತ್ಡೇ ಆಚರಿಸಿದರು. ಅಡ್ವಾಣಿ ಕೈ ಹಿಡಿದು ನಡೆಸಿಕೊಂಡು ಬಂದ ಮೋದಿ, ಹೊರಾಂಗಣದಲ್ಲಿ ಆಯೋಜಿಸಿದ ಹುಟ್ಟು ಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡರು. ಬಳಿಕ ವೆಂಕಯ್ಯ ನಾಯ್ಡು ನೆರವಿನಿಂದ ಅಡ್ವಾಣಿ ಕೇಕ್ ಕತ್ತರಿಸಿದರು. ಇದೆಲ್ಲವೂ ಬಿಜೆಪಿ ಹಂಚಿಕೊಂಡ ಕಿರು ವೀಡಿಯೊದಲ್ಲಿ ಕಂಡುಬಂದಿದೆ.
ಇನ್ನು ಪ್ರಧಾನಿ ಟ್ವೀಟ್ ಮಾಡಿದ್ದು " ದೇಶದ ಜನತೆಯನ್ನು ಸಬಲೀಕರಣಗೊಳಿಸಲು ಹಾಗೂ ಭಾರತದ ಸಾಂಸ್ಕೃತಿಕ ಹಿರಿತನ ಎತ್ತಿ ಹಿಡಿದ ಅಡ್ವಾಣಿಗೆ ದೇಶ ಚಿರಋಣಿಯಾಗಿದೆ. ಜನ್ಮದಿನದ ಶುಭಾಶಯಗಳು, ಉತ್ತಮ ಹಾಗೂ ದೀರ್ಘ ಆರೋಗ್ಯಕ್ಕೆ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ