ಬೆಂಗಳೂರು, ನ.08 (DaijiworldNews/PY): ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೊಟೇಲ್ಗಳಲ್ಲಿ ಊಟ, ತಿಂಡಿಗಳ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಹೊಟೇಲ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ಊಟ, ತಿಂಡಿ, ಕಾಫಿ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಪಾರ್ಸೆಲ್ ದರ ಕೂಡಾ ಶೇ.5ರಿಂದ 10ರಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು ಸೆಲ್ಫ್ ಸರ್ವಿಸ್ ಆಹಾರದ ದರದಲ್ಲೂ ಹೆಚ್ಚಳ ಮಾಡಲಾಗಿದ್ದು, ಹೊಟೇಲ್ ಮಾಲೀಕರು ಶೇ.5ರಿಂದ 10ಕ್ಕೆ ದರ ಏರಿಕೆ ಮಾಡಿದ್ದಾರೆ.
ಗ್ಯಾಸ್ ಸಿಲಿಂಡರ್ ಬೆಲೆ 2 ಸಾವಿರ ರೂ. ತಲುಪಿದೆ. ಅದಕ್ಕೆ ಶೇ.18ರಷ್ಟು ಸರಕು ಹಾಗೂ ಸಾಗಣೆ ತೆರಿಗರ ವಿಧಿಸಲಾಗುತ್ತಿದೆ. ಅಡುಗೆ ಎಣ್ಣೆಯ ಬೆಲೆಯೂ ದುಬಾರಿಯಾಗಿದೆ. ಈ ಹಿನ್ನೆಲೆ ಹೊಟೇಲ್ಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ.
ಈ ವಿಚಾರದ ಬಗ್ಗೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಸಧ್ಯಕ್ಷ ಪಿ ಸಿ ರಾವ್ ಅವರು ಮಾಹಿತಿ ಹಂಚಿಕೊಂಡಿದ್ದರು.
ಮಸಾಲೆ ದೋಸೆ ಬೆಲೆ 75 ರೂ. ಗೆ ಏರಿಕೆ, ಕಾಫಿ, ಟೀ ಬೆಲೆ 20 ರೂ., ಇಡ್ಲಿ, ವಡೆ ಬೆಲೆ 40 ರೂ., ಒಂದು ಪ್ಲೇಟ್ ಪೂರಿ ಬೆಲೆ 75 ರೂ. ಗೆ ಏರಿಕೆ ಮಾಡಲಾಗಿದೆ.