ಬಳ್ಳಾರಿ, ನ.08 (DaijiworldNews/HR): ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹೆಸರಲ್ಲಿ ಬಳ್ಳಾರಿಯಲ್ಲಿ ಉಚಿತ ಶಾಲೆ ಆರಂಭಿಸುವುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ.
ಈ ಕುರಿತು ಪುನೀತ್ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, "ಬಳ್ಳಾರಿ ಬಸ್ ನಿಲ್ದಾಣಕ್ಕೆ ಪುನೀತ್ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು"ಎಂದರು.
ಇನ್ನು ಪುನೀತ್ ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವನಾದ್ರೂ ಆತ ಹಾಕಿರುವ ಮಾರ್ಗದಲ್ಲಿ ನಾನೂ ಕೂಡ ಊರಿನ ಜನರಿಗೆ ಸಹಾಯ ಮಾಡುವೆ. ರಾಜಕೀಯ ಹೊರತಾಗಿ ಜನರ ಸೇವೆ ಮಾಡುತ್ತೇನೆ. ನನಗೆ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಬಳ್ಳಾರಿಯಲ್ಲಿರಲು ಅವಕಾಶ ಕೊಟ್ಟಿದೆ. ಆದ್ದರಿಂದ ಬಳ್ಳಾರಿಯಲ್ಲಿದ್ದು ಪುನೀತ್ ರೀತಿ ಜನ ಸೇವೆ ಮಾಡುತ್ತೇನೆ" ಎಂದು ಹೇಳಿದ್ದಾರೆ.