ನವದೆಹಲಿ, ನ.08 (DaijiworldNews/PY): ಮಣಿಪುರದ ಇಬ್ಬರು ಶಾಸಕರು ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೇಂದ್ರ ಸಚಿವ ಸರ್ವಾನಂದ ಸೋನಾವಾಲ್ ಮತ್ತು ಮಣಿಪುರದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಸಂಬಿತ್ ಪಾತ್ರ ಅವರ ನೇತೃತ್ವದಲ್ಲಿ ರಾಜ್ಕುಮಾರ್ ಇಮೊ ಸಿಂಗ್ ಹಾಗೂ ಕಾಂಗ್ರೆಸ್ ಶಾಸಕ ಯಮ್ಥಾಂಗ್ ಹಾಕಿಪ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜ್ಕುಮಾರ್ ಇಮೊ ಸಿಂಗ್ ಅವರ ಸಹ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. ಆದರೆ, ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಹಿನ್ನೆಲೆ ಪಕ್ಷ ಅಮಾನತುಗೊಳಿಸಿತ್ತು.
ರಾಜ್ಕುಮಾರ್ ಇಮೊ ಸಿಂಗ್ ಅವರ ತಂದೆ ರಾಜ್ಕುಮಾರ್ಜೈಚಂದ್ರ ಸಿಂಗ್ ಅವರು ಮಣಿಪುರದ ಸಿಎಂ ಆಗಿ, ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.