ನವದೆಹಲಿ, ನ.08 (DaijiworldNews/PY): ಬಿಜೆಪಿಯ ಮಿತ್ರಪಕ್ಷ ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, "ರಾಮ ನಿಷಾದ ಕುಟುಂಬದಲ್ಲಿ ಜನಿಸಿದ್ದು, ಆತ ರಾಜ ದಶರಥನ ಮಗನಲ್ಲ" ಎಂದಿದ್ದಾರೆ.
ಸಂಜಯ್ ನಿಶಾದ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಅಂಶು ಅವಸ್ತಿ, "ಅವರು ಬಿಜೆಪಿಯ ಅಜೆಂಡಾವನ್ನು ಪ್ರಚಾರ ಮಾಡುತ್ತಿದ್ದಾರೆ. ಈಗ ಅವರು ರಾಮನ ಕುರಿತು ಮಾತನಾಡುತ್ತಿದ್ದಾರೆ. ಆದರೆ, ಬಿಜೆಪಿ ಅಲಹಾಬಾದ್ ನಿಶಾದ್ ದೋಣಿ ಅವಘಡವಾದ ಸಂದರ್ಭ ಮೌನವಾಗಿದ್ದರು" ಎಂದಿದ್ದಾರೆ.
"ರಾಮನ ಬಗ್ಗೆ ಸನಾತನ ಹಿಂದೂ ಧರ್ಮದವರಿಗೆ ಮಾತ್ರವೇ ಮಾತನಾಡುವ ಹಕ್ಕಿದೆ" ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಲ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಬಿಜೆಪಿ ಸೆಪ್ಟೆಂಬರ್ ಔಪಚಾರಿಕವಾಗಿ ಘೋಷಣೆ ಮಾಡಿತ್ತು.