ಬೆಂಗಳೂರು, ನ.08 (DaijiworldNews/PY): "ಬಿಟ್ ಕಾಯಿನ್ ದಂಧೆ ಹಿಂದೆ ಯಾರ ಕೈವಾಡಿ ಇದೆ ಎನ್ನುವ ಬಗ್ಗೆ ತನಿಖೆ ನಡೆದ ಬಳಿಕ ತಿಳಿಯುತ್ತದೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ದಂಧೆಯಲ್ಲಿ ಆಡಳಿತ ಪಕ್ಷದವರ ಕೈವಾಡವಿದೆ. ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎನ್ನುವ ವಿಪಕ್ಷ ನಾಯಕರ ಆರೋಪದ ವಿರುದ್ದ ಕಿಡಿಕಾರಿದ್ದಾರೆ.
"ನಾನು ಬಿಟ್ ಕಾಯಿನ್ ದಂಧೆ ಕುರಿತು ಮಾತನಾಡುವುದಿಲ್ಲ. ಈ ಬಗ್ಗೆ ತನಿಖೆ ಮಾಡಿದ ಬಳಿಕ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲಿದೆ. ಬಿಟ್ ಕಾಯಿನ್ ದಂಧೆಯಲ್ಲಿ ಸಿಎಂ ಮಗನಿದ್ದಾರಾ?. ಸಚಿವರ ಮಗನಿದ್ದಾರಾ?. ಈ ಬಗ್ಗೆ ಸಾರ್ವಜನಿಕ ಚರ್ಚೆಯಾದಲ್ಲಿ ನಾನ್ಯಾಕೆ ಪ್ರತಿಕ್ರಿಯೆ ನೀಡಲಿ?" ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆ ವಿವಾರದ ಬಗ್ಗೆ ಮಾತನಾಡಿದ ಅವರು, "ಮೇಕೆದಾಟು ಯೋಜನೆ ರಾಜ್ಯದ ಪ್ರತಿಯೋರ್ವರ ಅಪೇಕ್ಷೆ. ಕಾಂಗ್ರೆಸ್ ನಾಯಕರಿಗೆ ಈಗ ಏಕೆ ಮೇಕೆದಾಟು ನೆನೆಪಿಗೆ ಬಂತು?. ಅವರ ಸರ್ಕಾರ ಇದ್ದ ಸಂದರ್ಭ ಏಕೆ ಈ ಕುರಿತು ಮಾತನಾಡುವುದಿಲ್ಲ?. ಅವರು ಸುಮ್ಮನೆ ರಾಜಕೀಯ ಮಾಡಬೇಕು ಎಂದು ಮಾತನಾಡಿತ್ತಾರೆ ಅಷ್ಟೆ. ಆದರೆ, ಮೇಕೆದಾಟು ಯೋಜನೆ ಮಾಡುವುದಿಲ್ಲ ಎಂದು ನಾವು ಹೇಳಿಲ್ಲ. ಕಾನೂನು ಬದ್ಧವಾಗಿ ಯೋಜನೆ ಜಾರಿಗೆ ನಿರ್ಧರಿಸುತ್ತೇವೆ" ಎಂದಿದ್ದಾರೆ.