ಬೆಂಗಳೂರು, ನ.08 (DaijiworldNews/HR): ಪುನೀತ್ಗೆ ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ. ಹೆಸರ ಪಕ್ಕದಲ್ಲೊಂದು ಟೈಟಲ್ ಅಷ್ಟೆಯಾಗಿದೆ. ಎಲ್ಲರ ಆತ್ಮದಲ್ಲಿಯೂ ಅಪ್ಪು ಶ್ರೀಯಾಗಿರುತ್ತಾನೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ಅಂಗವಾಗಿ ಸಮಾಧಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗದ್ದಲ ಆಗೋದು ಬೇಡ ಎಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ಬಳಿ ಬರಲು ಅವಕಾಶ ನೀಡಿಲ್ಲ. ನಾವು 11 ದಿನದ ಕಾರ್ಯ ಎಂದು ಮಾಡುತ್ತಿರುವುದೇ ನೋವಿನ ಸಂಗತಿಯಾಗಿದೆ. ಆದರೆ ಎಲ್ಲಾ ಕಾರ್ಯ ಮಾಡಬೇಕಿದೆ. ನನಗೆ ಇದನ್ನು ಬಿಟ್ಟು ಬೇರೆ ಏನನ್ನು ಹೇಳಬೇಕು ಎಂದು ತಿಳಿಯುತ್ತಿಲ್ಲ" ಎಂದರು.
ಇನ್ನು ಅಪ್ಪು ಖುಷಿ ಆಗಬೇಕಾದರೆ ಜನ ಪ್ರಾಣ ಕಳೆದುಕೊಳ್ಳಬಾರದು. ಅಪ್ಪು ಹೆಸರನ್ನು ಉಳಿಸಲು ನೀವು ಪ್ರಯತ್ನಪಡಬೇಕು. ನಿಮ್ಮ ಕುಟುಂಬ ನಿಮ್ಮನ್ನು ನಂಬಿಕೊಂಡು ಇದೆ. ನಿಮ್ಮ ಕೈಲಿ ಆದಷ್ಟು ಬೇರೆಯವರಿಗೆ ಸಹಯಾ ಮಾಡಿ" ಎಂದಿದ್ದಾರೆ.
ಪುನೀತ್ಗೆ ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ. ಹೆಸರ ಪಕ್ಕದಲ್ಲೊಂದು ಟೈಟಲ್ ಅಷ್ಟೆಯಾಗಿದೆ. ಎಲ್ಲರ ಆತ್ಮದಲ್ಲಿಯೂ ಅಪ್ಪು ಶ್ರೀಯಾಗಿರುತ್ತಾನೆ ಅದೇ ನಮಗೆ ದೊಡ್ಡುದು ಎಂದು ಹೇಳಿದ್ದಾರೆ.