ಘಾಜಿಯಾಬಾದ್, ನ.08 (DaijiworldNews/PY): ಮಾದಕ ವ್ಯಸನಿಯಾಗಿದ್ದ ಪುತ್ರ ಬ್ಲೇಡ್ ತೋರಿಸಿ ತನ್ನ ತಾಯಿಯ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸದಾ ಡ್ರಗ್ಸ್, ಮದ್ಯ ನಶೆಯಲ್ಲಿ ಇರುತ್ತಿದ್ದ ಮಗನೋರ್ವ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದು, ತಾನು ಹೇಳಿದಂತೆ ಕೇಳದೇ ಇದ್ದಲ್ಲಿ ನಿನ್ನನ್ನು ಹತ್ಯೆ ಮಾಡುತ್ತೇನೆ ಎಂದು ತಾಯಿಯ ಕುತ್ತಿಗೆಗೆ ಬ್ಲೇಡ್ ಇಟ್ಟಿದ್ದಾನೆ. ಲೈಂಗಿಕಕ್ರಿಯೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಈ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಕತ್ತು ಸೀಳುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಘಟನೆಯ ಬಳಿಕ ತಾಯಿ ನೊಂದಿದ್ದು, ನನ್ನ ಮಗ ಈ ರೀತಿಯಾದ ಹೇಯ ಕೃತ್ಯ ಮಾಡುತ್ತಾನೆ ಎಂದು ಭಾವಿಸಿರಲಿಲ್ಲ. ಬಳಿಕ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಯ ಬಗ್ಗೆ ಪೊಲೀಸರ ಬಳಿ ವಿವರಿಸಿದ್ದಾಳೆ. ನನ್ನ ಪತಿ ರಾಂಪುರ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಆತನೂ ಡ್ರಗ್ಸ್ ದಾಸನಾಗಿದ್ದಾನೆ. ನಾನು ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಆದರೆ, ನನ್ನ ಮಗನೇ ಈ ರೀತಿ ಮಾಡುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.