ನವದೆಹಲಿ, ನ 08 (DaijiworldNews/MS): ಗುಜರಾತ್ನ ಓಖಾದಿಂದ ಹೊರಟಿದ್ದ "ಜಲ್ಪರಿ" ಎಂಬ ಹೆಸರಿನ ಮೀನುಗಾರಿಕಾ ದೋಣಿಯೂ ಅರಬ್ಭೀ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಸಂದರ್ಭ ಪಾಕಿಸ್ತಾನದ ಕಡಲ ಭದ್ರತಾ ಪಡೆ (ಪಿಎಂಎಸ್ಎ) ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಮಹಾರಾಷ್ಟ್ರದ ಬೆಸ್ತರೊಬ್ಬರು ಮೃತಪಟ್ಟಿದ್ದು ಈ ವಿಚಾರವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಎಂದು ತಿಳಿದುಬಂದಿದೆ.
ದೋಣಿಯಲ್ಲಿದ್ದ ಇತರ ಆರು ಭಾರತೀಯರನ್ನು ಸಿಬ್ಬಂದಿ ಬಂಧಿಸಿದ್ದಾರೆ ಎಂದು ವರದಿಗಳಿದ್ದು ಆದರೆ, ಬಂಧನವನ್ನು ಭಾರತ ಸರ್ಕಾರ ಖಚಿತಪಡಿಸಿಲ್ಲ. ಪಾಕಿಸ್ತಾನದ ಕಡಲ ಭದ್ರತಾ ಪಡೆ (ಪಿಎಂಎಸ್ಎ) ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಶ್ರೀಧರ್ ರಮೇಶ್ ಚಾಮ್ರೆ (32) ಎಂಬುವವರು ಮೃತಪಟ್ಟಿದ್ದರು.
"ಮೀನುಗಾರನ ಹತ್ಯೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಷಯವನ್ನು ಪಾಕಿಸ್ತಾನದೊಂದಿಗೆ ರಾಜತಾಂತ್ರಿಕವಾಗಿ ಚರ್ಚಿಸಲಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಅರಬ್ಬಿ ಸಮುದ್ರದ ಗುಜರಾತ್ ಕರಾವಳಿ ಸಮೀಪದಲ್ಲಿ ಜಲ್ಪಾರಿ ಎಂಬ ಬೋಟ್ನಲ್ಲಿ ಮೀನುಗಾರಿಕೆ ಮಾಡುತ್ತಿರಬೇಕಾದರೆ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ಸಿಬ್ಬಂದಿ ಗುಂಡು ಹಾರಿಸಿ ಬೆಸ್ತನ ಹತ್ಯೆ ಮಾಡಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ , ಭಾರತೀಯ ಮೀನುಗಾರಿಕಾ ದೋಣಿ ಪಾಕಿಸ್ತಾನದ ಜಲ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಿಸಿದ್ದು, ಎಚ್ಚರಿಕೆಯ ಬಳಿಕವೂ ಹಿಂದಿರುಗದ ಕಾರಣ ಗುಂಡು ಹಾರಿಸಬೇಕಾಯಿತು" ಎಂದು ಹೇಳಿದೆ.