ನವದೆಹಲಿ, ನ 08 (DaijiworldNews/MS): ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು, ಪಕ್ಷ ಮತ್ತು ಜನರ ನಡುವಿನ "ನಂಬಿಕೆಯ ಸೇತುವೆ" ಆಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಭಾನುವಾರದಂದು , ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, " ಸೇವೆ, ಸಂಕಲ್ಪ ಮತ್ತು ತ್ಯಾಗ ಎಂಬ ಪಕ್ಷದ ಮಾರ್ಗದರ್ಶಿ ಮೌಲ್ಯಗಳ ಆಧಾರದ ಮೇಲೆ ಅವರು ಜನರೊಂದಿಗೆ ಪಕ್ಷದ ಕಾರ್ಯಕರ್ತರು ಸಂಬಂಧವನ್ನು ಬೆಸೆಯಬೇಕು" ಎಂದು ಮನವಿ ಮಾಡಿದ್ದಾರೆ.
ತಮ್ಮ 50 ನಿಮಿಷಗಳ ಸಮಾರೋಪ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ಬಿಜೆಪಿಯು "ಸೇವೆ, ಸಂಕ್ಲಪ್ ಔರ್ ಸಂಪರಣ (ಸೇವೆ, ನಿರ್ಣಯ ಮತ್ತು ಬದ್ಧತೆ)" ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಹೊರತು ಬಿಜೆಪಿ ಕುಟುಂಬ ನಡೆಸುವ ಪಕ್ಷವಲ್ಲ 'ಕುಟುಂಬದ ಸುತ್ತ ಸುತ್ತುವುದಿಲ್ಲ' ಎಂದು ಒತ್ತಿ ಹೇಳಿದರು.
ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜನರ ವಿಶ್ವಾಸ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.