ಮುಂಬೈ, ನ.07 (DaijiworldNews/PY): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ಭಾನುವಾರ ರದ್ದುಗೊಳಿಸಿದ್ದು, ನವೆಂಬರ್ 12ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.
ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ರಜಾಕಾಲದ ಪೀಠವು ನ.6ರ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ.
ಇದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ದವಾಗಿದೆ ಎನ್ನುವ ಕಾರಣಕ್ಕೆ ದೇಶ್ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಎನ್ಸಿಪಿ ನಾಯಕ ಸಮ್ಮತಿಸಿದ್ದಾರೆ, ಇಡಿ ವಿಚಾರಣೆಗೆ ಸ್ವಯಂಪ್ರೇರಿತರಾಗಿದ್ದಾರೆ ಎಂದು ಅನಿಲ್ ದೇಶ್ಮುಖ್ ಅವರ ವಕೀಲ ವಿಕ್ರಮ್ ಚೌಧರಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಬಳಿಕ ನ್ಯಾಯಾಲಯವು ಅನಿಲ್ ದೇಶ್ಮುಖ್ ಅವರನ್ನು ನ.12ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.