ಜೈಪುರ, ನ.7 (DaijiworldNews/HR): ಬಿಜೆಪಿಯ ಮಾಜಿ ಶಾಸಕಿ ಅಮೃತಾ ಮೇಘವಾಲ್ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಮೇಘವಾಲ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರದ ಬಯೋಲಾಜಿಕಲ್ ಪಾರ್ಕ್ ಪ್ರದೇಶದಿಂದ ಕುಟುಂಬದವರ ಜತೆ ಸಂಚರಿಸುತ್ತಿದ್ದಾಗ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಮೇಘವಾಲ್ ಆರೋಪಿಸಿದ್ದಾರೆ.
ಇನ್ನು ಕಾರಿನ ಕಿಟಕಿ ಗಾಜು ಪುಡಿಯಾಗಿದ್ದು, ಮೇಘವಾಲ್ ಅವರ ಕಿವಿಗೆ ಗಾಯಗಳಾಗಿವೆ ಎಂದೂ ಅವರು ತಿಳಿಸಿದ್ದಾರೆ.
ಮೇಘವಾಲ್ ಮತ್ತು ಆರೋಪಿಗಳ ಮಧ್ಯೆ ಬಯೋಲಾಜಿಕಲ್ ಪಾರ್ಕ್ ಪ್ರದೇಶದಲ್ಲಿ ಮಾತಿನ ಚಕಮಕಿ ನಡೆದಿದ್ದು, ಕಾರನ್ನು ಹಿಂಬಾಲಿಸಿದ ಆರೋಪಿಗಳು ಕಲ್ಲೆಸೆದಿದ್ದಾರೆ ಎನ್ನಲಾಗಿದೆ.