ಹೈದರಾಬಾದ್, ನ.07 (DaijiworldNews/PY): ಭದ್ರಾದ್ರಿ ಕೊತಗುಂಡೆಂ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಿಷೇಧಿತ ಸಿಪಿಐ ಸಂಘಟನೆಗೆ ಸೇರಿದ ನಾಲ್ವರು ಸದಸ್ಯರು ಪೊಲೀಸರಿಗೆ ಶರಣಾಗಿದ್ದಾರೆ.
ಸಾಂದರ್ಭಿಕ ಚಿತ್ರ
"ಒಂದು ವರ್ಷಕ್ಕೂ ಹೆಚ್ಚು ಕಾಲ ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ ಮಿಲಿಷಿಯಾ ಸದಸ್ಯರಾಗಿ ಕೆಲಸ ಮಾಡುತ್ತಿದ್ದ ಚೆರ್ಲಾ ಮಂಡಲಕ್ಕೆ ಸೇರಿದ ನಾಲ್ವರು ಪೊಲೀಸರ ಮುಂದೆ ಶರಣಾಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಈ ನಾಲ್ವರು ಮಾವೋವಾದಿಗಳು ಗ್ರಾಮಗಳಿಂದ ಪಕ್ಷಕ್ಕೆ ಆಹಾರ ಪೂರೈಕೆ ಮಾಡುತ್ತಿದ್ದರು. ಅಲ್ಲದೇ, ಮಾವೋವಾದಿ ಪಕ್ಷಕ್ಕೆ ಪೊಲೀಸರ ಚಲನವಲನಗಳ ಬಗ್ಗೆ ತಿಳಿಸುತ್ತಿದ್ದರು ಎನ್ನಲಾಗಿದೆ.