ಕೊಟ್ಟಿಗೆಹಾರ, ನ.07 (DaijiworldNews/PY): ಚಲಿಸುತ್ತಿದ್ದ ಬೈಕ್ನ ಮೇಲೆ ಮರ ಬಿದ್ದ ಪರಿಣಾಮ ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ಭಾನುವಾರ ಚಾರ್ಮಾಡಿ ಘಾಟ್ನ ಸೋಮನಕಾಡು ಸಮೀಪ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಮಾಲೂರು ಗ್ರಾಮದ ಜೀವನ್ (21) ಎಂದು ಗುರುತಿಸಲಾಗಿದೆ.
ಬೈಕ್ ಚಲಿಸುತ್ತಿದ್ದ ಸಂದರ್ಭ ಜೀವನ್ ಅವರ ತಲೆ ಮೇಲೆ ಮರ ಉರುಳಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿ ಎನ್ನುವವರು ಬೈಕ್ ಚಲಾಯಿಸುತ್ತಿದ್ದು, ಜೀವನ್ ಹಿಂಬದಿಯಲ್ಲಿ ಕುಳಿತಿದ್ದರು. ಈ ಸಂದರ್ಭ ಏಕಾಏಕಿ ಜೀವನ್ ಅವರ ಮೇಲೆ ಮರ ಬಿದ್ದಿದೆ. ಪರಿಣಾಮ ಜೀವನ್ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಈ ವೇಳೆ ಅವರನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.
6 ಬೈಕ್ಗಳಲ್ಲಿ 11 ಮಂದಿ ಧರ್ಮಸ್ಥಕ್ಕೆ ಹೋಗುತ್ತಿದ್ದ ಮಾರ್ಗದ ನಡುವೆ ಈ ಅವಘಡ ಸಂಭವಿಸಿದೆ.
ಘಟನೆಯ ಬಗ್ಗೆ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.