ಚಂಡೀಗಡ, ನ.07 (DaijiworldNews/PY): "ಹರಿಯಾಣದ ಮಾಜಿ ಸಚಿವ ಮನೀಶ್ ಗ್ರೋವರ್ ಅವರನ್ನು ಯಾರೇ ವಿರೋಧಿಸಿದರೂ, ಅವರಣ ಕಣ್ಣುಗಳನ್ನು ಕಿತ್ತು, ಕೈ ಕತ್ತರಿಸಲಾಗುವುದು" ಎಂದು ಬಿಜೆಪಿ ಸಂಸದ ಅರವಿಂದ್ ಶರ್ಮಾ ಬೆದರಿಕೆ ಹಾಕಿದ್ದಾರೆ.
ಶುಕ್ರವಾರ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದಲ್ಲಿ ದೇವಸ್ಥಾನವೊಂದರ ಒಳಗೆ ಬಿಜೆಪಿ ನಾಯಕ ಮನೀಶ್ ಗ್ರೋವರ್ ಇದ್ದಾಗ ಅವರನ್ನು ರೈತರು ಘೇರಾವ್ ಮಾಡಿದ್ದರು. ಇದನ್ನು ವಿರೋಧಿಸಿ ರೋಹ್ಟಕ್ನಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸಿದೆ.
ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಶರ್ಮಾ, "ದೀಪೆಂದರ್ ಹೂಡಾ ಅವರು ಮನೀಶ್ ಗ್ರೋವರ್ ಅವರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರು. ಈ ಕಾರಣದಿಂದ ದೀಪೆಂದರ್ ಹೂಡಾ ಗ್ರೋವರ್ ಅವರನ್ನು ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಹಾಗೂ ಅವರ ಪುತ್ರ ವಿರೋಧಿಸುತ್ತಾರೆ" ಎಂದಿದ್ದಾರೆ.