ಅಹ್ಮದಾಬಾದ್, ನ.07 (DaijiworldNews/PY): ಗುಜರಾತ್ನ ಖೇಡಾ ಜಿಲ್ಲೆಯ ಪಟ್ಟಣ ಪೊಲೀಸ್ ಠಾಣೆ ಬಳಿ ಅಗ್ನಿ ಅವಘಡ ಸಂಭವಿಸಿದ್ದು, 25ಕ್ಕೂ ಅಧಿಕ ವಾಹನಗಳು ಸುಟ್ಟುಹೋಗಿವೆ.
ಘಟನೆಯಲ್ಲಿ ಬೈಕ್, ಆಟೋ, ಕಾರು ಸೇರಿದಂತೆ ಸುಮಾರು 25ಕ್ಕೂ ಅಧಿಕ ವಾಹನಗಳು ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ.
ಅಗ್ನಿ ಅವಘಡದಲ್ಲಿ ಸುಟ್ಟುಹೋದ ವಾಹನಗಳಲ್ಲಿ ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳು ಎನ್ನಲಾಗಿದೆ. ಇನ್ನು ಕೆಲವು ವಾಹನಗಳು ಪೊಲೀಸರಿಗೆ ಸೇರಿದ್ದು ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ 5ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿವೆ.
ಖೇಡಾ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.