ಬೆಂಗಳೂರು, ನ.06 (DaijiworldNews/HR): ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ , ಮತ್ತು ಮನರಂಜನಾ ಪಾರ್ಕ್ ಗಳು ಪಾವತಿಸುವ ಆಸ್ತಿ ತೆರಿಗೆಯಿಂದ ಶೇ 50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಎಲ್ ಪ್ರಸಾದ್ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರ ಕೆಲವು ಷರತ್ತಿಗೊಳಪಟ್ಟು ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ದ, ಮತ್ತು ಮನರಂಜನಾ ಪಾರ್ಕ್ ಗಳು ಪಾವತಿಸುವ ಆಸ್ತಿ ತೆರಿಗೆಯಿಂದ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಹೋಟೆಲ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳ ಮಾಲೀಕರು ಶೇ 50 ರಷ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕು ಹಾಗೂ ಶೇ 50 ರಷ್ಟು ಆಸ್ತಿ ತೆರಿಗೆಯಿಂದ ರಿಯಾಯಿತಿ ಪಡೆಯಲು ಈ ಆದೇಶದಲ್ಲಿ ಲಗತ್ತಿಸುರುವ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದಾಗಿದೆ.
ಕೊರೊನಾ ಸೋಂಕಿನ ಹಿನ್ನೆಲೆ ಆರ್ಥಿಕ ನಷ್ಟ ಅನುಭವಿಸಿದ ಹಿನ್ನೆಲೆ ಸರ್ಕಾರ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿದೆ ಎನ್ನಲಾಗಿದೆ.