ಬೆಂಗಳೂರು, ನ.06 (DaijiworldNews/HR): ಬಿಟ್ ಕಾಯಿನ್ ದಂಧೆಯಲ್ಲಿ ಯಾವ ಪಕ್ಷದವರಿದ್ದರೋ ಗೊತ್ತಿಲ್ಲ. ಹಾಗಾಗಿ ಬಿಟ್ ಕಾಯಿನ್ ದಂಧೆ ಬಗ್ಗೆ ಇಡಿ ಅಥವಾ ಸಿಐಡಿ ತನಿಖೆ ನಡೆಯಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಬಿಟ್ ಕಾಯಿನ್ ಪ್ರಕರಣ ತನಿಖೆ ಹಂತದಲ್ಲಿದ್ದು, ಇದರಲ್ಲಿ ಕಾಂಗ್ರೆಸ್ನವರು ಇದ್ದಾರೋ, ಬಿಜೆಪಿಯವರಿದ್ದಾರೋ ಗೊತ್ತಿಲ್ಲ. ಬಿಟ್ ಕಾಯಿನ್ ದಂದೆ ಬಗ್ಗೆ ಇಡಿ ಅಥವಾ ಸಿಐಡಿ ತನಿಖೆ ನಡೆಯಬೇಕು" ಎಂದಿದ್ದಾರೆ.
ಇನ್ನು ಮುಂದಿನ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಗುರುತಿಸಿಕೊಂಡಿದ್ದೇವೆ. ತಂತ್ರಗಾರಿಕೆಗಿಂತ ಪಕ್ಷ ಸಂಘಟನೆ ನಮಗೆ ಬಹಳ ಮುಖ್ಯ. ಕಳೆದ ಹಲವು ವರ್ಷಗಳಿಂದ ಯಾವ ಕ್ಷೇತ್ರ ಬಿಗಿ ಮಾಡಿಕೊಳ್ಳಬೇಕೋ ಅದನ್ನು ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.