ಮುಂಬೈ,ನ.06 (DaijiworldNews/HR): ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದ ಅವಧಿಯನ್ನು ನ. 13ರವರೆಗೆ ಕೋರ್ಟ್ ವಿಸ್ತರಿಸಿದೆ.
ಸಚಿನ್ ವಾಜೆ ವಿರುದ್ಧ ಉದ್ಯಮಿ ಬಿಮಲ್ ಅಗರವಾಲ್ ಅವರು ನೀಡಿದ ದೂರು ಆಧರಿಸಿ ಗೋರೆಗಾವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್ ಅವರೂ ಆರೋಪಿಯಾಗಿದ್ದಾರೆ.
ಇನ್ನು ಹೆಚ್ಚುವರಿ ತನಿಖೆಗೆಗಾಗಿ ಸಚಿನ್ ವಾಜೆ ಅವರನ್ನು ಏಳು ದಿನ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಕೊರಿದ್ದು, ಇದಕ್ಕೆ ಕೋರ್ಟ್ ಸಮ್ಮತಿಸಿತು. ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕವಿದ್ದ ವಾಹನಪತ್ತೆ ಪ್ರಕರಣ ಕರಿತು ಎನ್ಐಎ ಅಧಿಕಾರಿಗಳು ಮಾರ್ಚ್ನಲ್ಲಿ ವಾಜೆ ಅವರನ್ನು ಬಂಧಿಸಿದ್ದರು.