ನವದೆಹಲಿ, ನ.06 (DaijiworldNews/HR): "ಮೋದಿ ಸರ್ಕಾರವು ಅಭಿವೃದ್ಧಿಯ ಮಾತುಗಳಿಂದ ದೂರ ಉಳಿದಿರುವುದರಿಂದ ಲಕ್ಷಾಂತರ ಕುಟುಂಬಗಳು ಒತ್ತಾಯಪೂರ್ವಕವಾಗಿ ಸೌದೆ ಒಲೆಗಳನ್ನು ಹಚ್ಚುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ಗಳ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದ್ದು, ಬ್ರೇಕ್ ಕೂಡ ತುಂಡಾಗಿದೆʼ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಮೀಣ ಭಾಗದ ಶೇ. 42ರಷ್ಟು ಜನರು ಎಲ್ಪಿಜಿ ಸಿಲಿಂಡರ್ ಖರೀದಿಸಲಾರದೆ ಅದನ್ನು ಬಳಸುವುದನ್ನೇ ನಿಲ್ಲಿಸಿದ್ದು, ಅಡುಗೆ ಮಾಡಲು ಸೌದೆ ಒಲೆ ಬಳಸಲಾರಂಭಿಸಿದ್ದಾರೆ ಎಂಬ ಸಮೀಕ್ಷೆಯೊಂದರ ಮಾಹಿತಿ ಆಧರಿಸಿ ಪ್ರಕಟವಾಗಿರುವ ವರದಿಯೊಂದರ ಚಿತ್ರವನ್ನೂ ಹಂಚಿಕೊಂಡಿದ್ದಾರೆ.