ಲಂಡನ್, ನ. 05 (DaijiworldNews/SM): ಕೊರೋನಾ ಸೋಂಕು ಜಾಗತಿಕವಾಗಿ ವ್ಯಾಪಿಸಿದ್ದು, ಸೋಂಕು ನಿಯಂತ್ರಣಕ್ಕೆ ನಿರಂತರ ಹೋರಾಟಗಳು ಮುಂದುವರೆದಿದೆ. ಆದರೆ, ವಿಶ್ವದಲ್ಲೇ ಮೊದಲ ಬಾರಿಗೆ ಎಂಬಂತೆ ಬ್ರಿಟನ್ ಕೊರೋನಾಗೆ ಮಾತ್ರೆಗಳನ್ನು ಅನುಮೋದಿಸಿದೆ. ಆ ಮೂಲಕ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ ತಯಾರಿಸಿರುವ ಮಾತ್ರೆಗಳನ್ನು ನೀಡಲು ಬ್ರಿಟನ್ ಸರ್ಕಾರ ಒಪ್ಪಿಕೊಂಡಿದೆ. ಬ್ರಿಟನ್ನ ಇತಿಹಾಸದಲ್ಲಿ ಇದು ಮಹತ್ವದ ನಿರ್ಧಾರವಾಗಿದೆ. ಕೊವಿಡ್ ಚಿಕಿತ್ಸೆಗೆ ಮನೆಯಲ್ಲಿಯೇ ಔಷಧ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿರುವುದು ಮಹತ್ವದ ನಿರ್ಧಾರ ಎಂದು ಬ್ರಿಟನ್ನ ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.