ನವದೆಹಲಿ, ನ. 05 (DaijiworldNews/SM): ನಿರಂತರ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಮೂಲಕ ಸವಾರರಿಗೆ ಸಿಹಿ ನೀಡಿದ್ದ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆಯ ದರ ಕೂಡ ಇಳಿಕೆಯಾಗಿದೆ.
ತಿಂಗಳ ಹಿಂದೆ ಗಗನಕ್ಕೇರಿದ್ದ ಅಡುಗೆ ಎಣ್ಣೆ ಬೆಲೆ ಏರಿಕೆಗೆ ಕೇಂದ್ರ ಸರಕಾರ ಕಡಿವಾಣ ಹಾಕಿದೆ. ಪ್ರತೀ ಲೀಟರ್ ಎಣ್ಣೆ ದರದಲ್ಲಿ ಬರೊಬ್ಬರಿ 20ರೂಪಾಯಿ ಕಡಿತಗೊಳಿಸಿದೆ. ಆ ಮೂಲಕ ಜನರಿಗೆ ಮತ್ತೊಮ್ಮೆ ದೀಪಾವಳಿ ಉಡುಗೊರೆ ನೀಡಿದಂತಾಗಿದೆ.
ತಾಳೆ, ಶೇಂಗಾ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ತೈಲಗಳ ಬೆಲೆಗಳು ಕುಸಿದಿವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.