ಚಂಡಿಗಡ, ನ.05 (DaijiworldNews/PY): "ಭಾರತ-ಪಾಕಿಸ್ತಾನದ ಗಡಿಯ ಸಮೀಪ ಹೊಲವೊಂದಲ್ಲಿ ಸ್ಪೋಟಕ ತುಂಬಿದ್ದ ಟಿಫಿನ್ ಬಾಕ್ಸ್ ಪತ್ತೆಯಾಗಿರುವುದನ್ನು ಪಂಜಾಬ್ ಸರ್ಕಾರ ಗಂಭೀರವಾಗಿ ಪರಿಗಣಿಸಬಹುದು" ಎಂದು ಭಾವಿಸಿದ್ದೇನೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪಂಜಾಬ್ ಸರ್ಕಾರ ಹಾಗೂ ಗೃಹ ಸಚಿವ ಸುಖ್ಜಿಂದರ್ ಸಿಂಗ್ ರಾಂಧಾವ ಅವರು ನಿರಾಕರಣೆಯ ಮನಸ್ಥಿತಿಯಿಂದ ಹೊರಬರಬೇಕು ಹಾಗೂ ಗಂಭೀರವಾಗಿ ಬೆದರಿಕೆಯನ್ನು ಪರಿಗಣಿಸಬೇಕು" ಎಂದಿದ್ದಾರೆ.
"ಗಡಿಯಾಚೆಯಿಂದ ಬರುವ ಬೆದರಿಕೆ ಹಾಗೂ ಸವಾಲುಗಳನ್ನು ಎದುರಿಸಲು ವಿಶೇಷ ನಿಗಾ ವಹಿಸುವ ಹಾಗೂ ವಿಸ್ತೃತ ಯೋಜನೆಯನ್ನು ರೂಪಿಸುವ ಅವಶ್ಯಕತೆ ಇದೆ" ಎಂದು ತಿಳಿಸಿದ್ದಾರೆ.
"ಫಿರೋಜ್ಪುರ ಜಿಲ್ಲೆಯ ಅಲಿ ಕೇ ಗ್ರಾಮದ ಜಮೀನೊಂದರಲ್ಲಿ ಎರಡು ದಿನಗಳ ಹಿಂದೆ ಅಲಿ ಕೇ ಜಮೀನೊಂದರಲ್ಲಿ ಬಾಂಬ್ ಇಟ್ಟಿದ್ದ ಟಿಫಿನ್ ಬಾಕ್ಸ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ" ಎಂದು ಪೊಲೀಸರು ಹೇಳಿದ್ದರು.