ನವದೆಹಲಿ, ನ.05 (DaijiworldNews/PY): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಯುಟರ್ನ್ ಹೊಡೆದಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಧು, "ನನ್ನ ರಾಜೀನಾಮೆಯನ್ನು ನಾನು ಹಿಂತೆಗೆದುಕೊಂಡಿದ್ದೇನೆ. ಹೊಸ ಅಟಾರ್ನಿ ಜನರಲ್ ನೇಮಕವಾದಾಗ ನಾನು ಅಧಿಕಾರ ವಹಿಸಿಕೊಳ್ಳುತ್ತೇನೆ. ಇದು ನನ್ನ ಅಹಂನ ವಿಚಾರವಲ್ಲ. ಆದರೆ, ಪ್ರತಿಯೋರ್ವ ಪಂಜಾಬಿಯ ಹಿತಾಸಕ್ತಿಯಾಗಿದೆ" ಎಂದಿದ್ದಾರೆ.