ಹುಬ್ಬಳ್ಳಿ, ನ.05 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೊದಲು ತಮ್ಮ ಪಕ್ಷದ ವಿಚಾರಗಳತ್ತ ಗಮನಹರಿಸಲಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಂಗಳೂರಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ವಿಭಜನೆಯಾಗುವ ಹಂತದಲ್ಲಿದೆ. ಹೀಗಿರುವಾಗ ಡಿ ಕೆ ಶಿವಕುಮಾರ್ ಅವರು ತಮ್ಮ ಪಕ್ಷದ ಕಡೆ ಗಮನಹರಿಸುವುದು ಉತ್ತಮ" ಎಂದಿದ್ದಾರೆ.
ಹಾನಗಲ್ ಸೋಲಿನ ಬಳಿಕ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ ಎನ್ನುವ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ ಸಿಂದಗಿಯಲ್ಲಿ ಹೀನಾಯವಾಗಿ ಸೋತಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗುವ ಹಂತದಲ್ಲಿದ್ದು, ಮೊದಲು ಡಿಕೆಶಿಯವರು ತಮ್ಮ ಪಕ್ಷದತ್ತ ಗಮನಹರಿಸಲಿ" ಎಂದು ತಿಳಿಸಿದ್ದಾರೆ.