ನವದೆಹಲಿ, ನ.04 (DaijiworldNews/PY): "ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪರಿಸರಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ವಿಚಾರಣೆ ನಡೆಸುವ ಅಧಿಕಾರ ಇದೆ" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ನ್ಯಾಯಪೀಠವು ಪ್ರಕರಣವೊಂದರ ಸಂಬಂಧ ಅ.7ರಂದು ನೀಡಿದ್ದ ಆದೇಶಕ್ಕೆ ಸಂಬಂಧಪಟ್ಟಂತೆ ಈ ಸ್ಪಷ್ಟನೆ ನೀಡಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಾಯುತ್ತ ಸಂಸ್ಥೆಯಾಗಿದೆ. ಕೋರ್ಟ್ಗಳ ರೀತಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗದು ಎನ್ನುವ ವಾದವನ್ನು ತಳ್ಳಿಹಾಕಿತು. ದೂರು ಬರುವವರೆಗೂ ಮೌನವಾಗಿ ಕುಳಿತುಕೊಳ್ಳಲಾಗದು ಎಂದು ಹೇಳಿತು.
ದ್ವಿಸದಸ್ಯರ ಪೀಠವು ಅ.25ರಂದು ಗ್ರೇಟರ್ ಮುಂಬೈ ನಗರ ಪಾಲಿಕೆಯ ಅರ್ಜಿ ಸೇರಿ ಹಲವು ಅರ್ಜಿಗಳನ್ನು ಎನ್ಜಿಟಿಗೆ ವರ್ಗಾಯಿಸಿತ್ತು. ಅವರಗಳನ್ನು ಹೊಸ ಅರ್ಜಿಗಳು ಎಂದು ಪರಿಗಣಿಸುವಂತೆ ಕೂಡಾ ಸೂಚನೆ ನೀಡಿತ್ತು.