ಬೆಂಗಳೂರು, ನ. 4 (DaijiworldNews/HR): ಸಿದ್ದರಾಮಯ್ಯ ಅವರ ಮಾತನ್ನು ತಿರುಚಿ ಅಪಪ್ರಚಾರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿ ಎಂದು ಎಚ್ಸಿ ಮಹದೇವಪ್ಪ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಧಿದ ಅವರು, "ದಲಿತ ಸಮುದಾಯಕ್ಕೆ ಸೇರಿದ್ದರೂ ದಲಿತರ ನ್ಯಾಯಬದ್ಧ ಅವಕಾಶಗಳನ್ನು ಕಿತ್ತುಕೊಳ್ಳುತ್ತಿರುವ ಬಗ್ಗೆಮಾತನಾಧದ ಕಾರಜೋಳ, ಜಿಗಜಿಣಗಿ ಅವರು ಅಧಿಕಾರ ಸಿಕ್ಕಾಗ ದಲಿತರ ಪರವಾಗಿ ಅತಿ ಹೆಚ್ಚಿನ ಕೆಲಸ ಮಾಡಿದ ಸಿದ್ದರಾಮಯ್ಯ ಅವರು ಒಬ್ಬ ನಿಜವಾದ ಅಂಬೇಡ್ಕರ್ ವಾದಿ" ಎಂದರು.
ಇನ್ನು ದಲಿತರಿಗೆ ಎಸ್ಸಿಪಿ/ಟಿಎಸ್ಪಿ ಕಾಯ್ದೆ, ಜಾರಿಗೊಳಿಸಿ, ಗುತ್ತಿಗೆ ಮೀಸಲಾತಿ ಅವಕಾಶ ಕಲ್ಪಿಸಿ, ಬಡ್ತಿ ಮೀಸಲಾತಿ ಯೋಜನೆ ರೂಪಿಸಿ, ಕಲ್ಲು ಗಣಿಗಾರಿಕೆಯಲ್ಲಿ ಮೀಸಲಾತಿ, ಕೈಗಾರಿಕೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ ಸಿದ್ದರಾಮಯ್ಯ ಅವರು ಎಸ್ಸಿಪಿ/ಟಿಎಸ್ಪಿ ಕಾಯ್ದೆಯಡಿ 30 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನಿಗದಿಗೊಳಿಸಿದರು.