ಬೆಂಗಳೂರು, ನ.04 (DaijiworldNews/PY): "ಪೆಟ್ರೋಲ್ ಹಾಗೂ ಡೀಸೆಲ್ ಮಾತ್ರವಲ್ಲ, ಅಡುಗೆ ಅನಿಲ ದರ ಕೂಡಾ ಕಡಿಮೆ ಮಾಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಡುಗೆ ಅನಿಲದ ಬೆಲೆ ಕೂಡಾ ಕಡಿಮೆ ಮಾಡಬೇಕು. ಮಹಿಳೆಯ ಕಷ್ಟವನ್ನು ಸಹ ಕೇಂದ್ರ ಸರ್ಕಾರ ಅರಿತು ಸ್ಪಂದಿಸಬೇಕು" ಎಂದಿದ್ದಾರೆ.
"ಕೊಟ್ಟ ಮಾತಿನ ಪ್ರಕಾರ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡಬೇಕು. ಕೊರೊನಾ ನಂತರದ ಪರಿಸ್ಥಿತಿಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಕೂಡಾ ಹೆಚ್ಚದೆ. ದೇಶದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಲಿದೆ" ಎಂದು ತಿಳಿಸಿದ್ದಾರೆ.
ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಬರಬೇಕಾದವರು ಬೇಕಾದಷ್ಟು ಮಂದಿ ಇದ್ದಾರೆ. ಪಕ್ಷದ ನಿರ್ಧಾರವೇ ಮುಖ್ಯ. ಈಗ ಹೋಗಿರುವ ಮಂದಿಯ ಸ್ಥಿತಿ ಏನಾಗುತ್ತದೆ ಎಂದು ನೋಡೋಣ" ಎಂದು ಹೇಳಿದ್ದಾರೆ.