ನವದೆಹಲಿ, ನ. 4 (DaijiworldNews/HR): ಈ ಬಾರಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಣೆ ಮಾಡಲಿದ್ದು, ಜಮ್ಮುಕಾಶ್ಮೀರದ ನೌಶೇರಾ ಸೆಕ್ಟರ್ಗೆ ಈಗಾಗಲೇ ಹೋಗಿದ್ದಾರೆ.
ನೌಶೇರಾ ಸೇನಾ ಸೆಕ್ಟರ್ ನಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಬ್ಬದ ದಿನವನ್ನು ಕಳೆಯುತ್ತಿದ್ದು, ಪ್ರತೀ ವರ್ಷದಂತೆ ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ.
ಇನ್ನು ಕಳೆದ ವರ್ಷ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಣೆಗಾಗಿ ರಾಜಸ್ಥಾನದ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದರು.