ಹುಬ್ಬಳ್ಳಿ, ನ.04 (DaijiworldNews/PY): ರಾಜ್ಯದಲ್ಲಿ 2022ರ ಜನವರಿ 26ರಿಂದ ಜನಸೇವಕ ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ತಲಾ 7 ರೂ. ಇಳಿಕೆ ಮಾಡಲು ತೀರ್ಮಾನಿಸಿದೆ" ಎಂದಿದ್ದಾರೆ.
"ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ತಲಾ 7 ರೂ. ಗೆ ಇಳಿಸುತ್ತೇವೆ. ಬೆಲೆ ಇಳಿಕೆಯ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 2,100 ಕೋಟಿ. ರೂ ಹೊರೆಯಾಗಲಿದೆ. ಆದರೂ ಕೂಡಾ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಿದೆ. ಇಂದು ಸಂಜೆಯಿಂದಲೇ ದರ ಇಳಿಕೆಯಾಗಲಿದೆ" ಎಂದು ತಿಳಿಸಿದ್ದಾರೆ.
"ಈ ಮೂಲಕ ರಾಜ್ಯದಲ್ಲಿ ಪೆಟ್ರೋಲ್ ದರ ಅಂದಾಜು 95.50 ರೂ. ಹಾಗೂ ಡೀಸೆಲ್ ದರ ಅಂದಾಜು 81.50 ರೂ.ಆಗುವ ನಿರೀಕ್ಷೆಯಿದೆ" ಎಂದಿದ್ದಾರೆ.
"ನನಗೆ ಹೈಕಮಾಂಡ್ನಿಂದ ಯಾವುದೇ ಬುಲಾವ್ ಬಂದಿಲ್ಲ. ಸದ್ಯ ಸಂಪುಟ ವಿಸ್ತರಣೆ ಇಲ್ಲ" ಎಂದು ತಿಳಿಸಿದ್ದಾರೆ.