ಚತ್ತೀಸ್ಗಢ, ನ 04 (DaijiworldNews/MS): ಇಲ್ಲಿನ ರಾಜನಂದಗಾಂವ್ನ ಖೈರಗಢ ವಿಧಾನಸಭಾ ಕ್ಷೇತ್ರದ ಜನತಾ ಕಾಂಗ್ರೆಸ್ ಶಾಸಕ ದೇವವ್ರತ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ 52 ವರ್ಷ ವಯಸ್ಸಾಗಿತ್ತು.
ಬುಧವಾರ ತಡರಾತ್ರಿ 3 ಗಂಟೆ ಸುಮಾರಿನಲ್ಲಿ ದೇವವ್ರತ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.ಕೂಡಲೇ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಾಗಲೇ ಅವರೌ ಕೊನೆಯುಸಿರೆಳೆದಿದ್ದರು.
2018ರಲ್ಲಿ ಮಾಜಿ ಸಿಎಂ ಅಜಿತ್ ಜೋಗಿ ನೇತೃತ್ವದ ಜೆಸಿಸಿ ಪಕ್ಷ ಸೇರ್ಪಡೆಯಾಗಿದ್ದ ದೇವವ್ರತ ಸಿಂಗ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖೈರಗಢ ಕ್ಷೇತ್ರದ ಜನತಾ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ ದೇವವ್ರತ ಸಿಂಗ್ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನಲ್ಲಿದ್ದರು.