ನವದೆಹಲಿ, ನ.04 (DaijiworldNews/PY): ಪೆಟ್ರೋಲ್ ಹಾಗೂ ಡೀಸೆಲ್ ಮೇಲಿ ಸುಂಕ ಕಡಿತಗೊಳಿಸುವುದಾಗಿ ಘೋಷಿಸಿದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ವ್ಯಂಗ್ಯವಾಡಿದ್ದು, "ಇದು ಭಯದಿಂದ ತೆಗೆದುಕೊಂಡ ನಿರ್ಧಾರ, ಹೃದಯದಿಂದ ಅಲ್ಲ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇದು ಭಯದಿಂದ ತೆಗೆದುಕೊಂಡ ತೀರ್ಮಾನ, ಹೃದಯದಿಂದ ಅಲ್ಲ. ಮುಂಬರುವ ಚುನಾವಣೆಯಲ್ಲಿ ವಸೂಲಿ ಸರ್ಕಾರವು ಲೂಟಿಗೆ ಉತ್ತರ ಪಡೆಯುತ್ತದೆ" ಎಂದಿದ್ದಾರೆ.
ಬುಧವಾರ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಸುಂಕಗಳನ್ನು ಪೆಟ್ರೋಲ್ ಲೀಟರ್ಗೆ 5 ಹಾಗೂ ಡೀಸೆಲ್ಗೆ 10 ರೂ. ಕಡಿಮೆ ಮಾಡುವುದಾಗಿ ಘೋಷಿಸಿತ್ತು.
ಇಳಿಯ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ದರ 110 ರೂ. ನಿಂದ 105ಕ್ಕೆ ಇಳಿದಿದೆ. ಡೀಸೆಲ್ ದರ ಲೀಟರ್ಗೆ 98 ರೂ. ನಿಂದ 88ಕ್ಕೆ ಇಲಿಕೆಯಾಗಿದೆ. ದರವನ್ನು ಮತ್ತಷ್ಟು ಇಳಿಸುಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳನ್ನು ಒತ್ತಾಯಿಸಿದ್ದು, ಹಲವು ರಾಜ್ಯಗಳು ಇಂಧನ ದರ ಕಡಿತ ಘೋಷಿಸಿದವು.