ಉತ್ತರ ಪ್ರದೇಶ, ನ.04 (DaijiworldNews/PY): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಎಸ್ಐಟಿ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಂಜಿತ್ ಸಿಂಗ್ ಜಾಗೂ ಅವತಾರ್ ಸಿಂಗ್ ಅಲಿಯಾಸ್ ನಿಕ್ಕು ಎಂದು ಗುರುತಿಸಲಾಗಿದೆ.
"ಟಿಕೋನಿಯಾ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ದ ವಿವಿಧ ಸೆಕ್ಷನ್ಗಳಡಿ ಎರಡನೇ ಎಫ್ಐಆರ್ ದಾಖಲಿಸಲಾಗಿದೆ" ಎಂದು ಜಿಲ್ಲಾ ಅಪರಾಧ ವಿಭಾಗ ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಟಿಕೋನಿಯಾ ಠಾಣೆಯಲ್ಲಿ ಸುಮಿತ್ ಜೈಸ್ವಾಲ್ ಎಂಬಾತ ದಾಖಲಿಸಿದ ಎರಡನೇ ಪ್ರಕರಣದಲ್ಲಿ ಈವರೆಗೆ ನಾಲ್ವರು ಆರೋಪಗಳನ್ನು ಬಂಧಿಸಲಾಗಿದೆ.
"ಅವತಾರ್ ಸಿಂಗ್ ಹಾಗೂ ರಂಜಿತ್ ಸಿಂಗ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ" ಎಂದು ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಪಿ. ಯಾದವ್ ತಿಳಿಸಿದ್ದಾರೆ.