ಉತ್ತರ ಪ್ರದೇಶ, ನ 04 (DaijiworldNews/MS): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಬಗ್ಗೆ ಬೆಂಬಲ ಹೊಂದಿರುವಂತವರಾಗಿದ್ದು, ಅವರು ಮುಸ್ಲಿಮರನ್ನು ಓಲೈಸಲು ಧಾರ್ಮಿಕ ಮತಾಂತರವಾಗಲು ಹಿಂಜರಿಯುವುದಿಲ್ಲ ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಸ್ಲಾಮಿಕ್ ಜಗತ್ತಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸವಾಲಾಗಿ ಪರಿಣಮಿಸಿದ್ದಾರೆ. ಹೀಗಾಗಿ ಅಖಿಲೇಶ್ ಯಾದವ್ ಮುಸ್ಲಿಮರ ಬೆಂಬಲ ಪಡೆಯುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
"ಮುಸ್ಲಿಮರನ್ನು ಸಮಾಧಾನಪಡಿಸಲು, ಯಾದವ್ ಅವರು ನಮಾಜ್ ಮಾಡಿದರು ಮತ್ತು "ರೋಜಾ" (ಉಪವಾಸ) ಆಚರಿಸಿದರು. ಅವರ ಮತಗಳನ್ನು ಪಡೆಯಲು ಅವರು "ಮತಾಂತರ" (ಧಾರ್ಮಿಕ ಮತಾಂತರ)ಕ್ಕೂ ಮಂದಾಗಬಹುದು ಎಂದು ಹೇಳಿದ್ದಾರೆ.
ಹರ್ದೋಯಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಖಿಲೇಶ್, ಮಹಾತ್ಮಗಾಂಧಿ, ಸರ್ದಾರ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು ಅವರಂತೆ ಮುಹಮ್ಮದ್ ಅಲಿ ಜಿನ್ನಾ ಅವರೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು' ಎಂದು ಹೇಳಿದ್ದರು. ಅಖಿಲೇಶ್ ಯಾದವ್ ಅವರ ಈ ಹೇಳಿಕೆಗೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಈಗ ಸಚಿವ ಶುಕ್ಲ ಅವರಿಂದಲೂ ಟೀಕೆ ಕೇಳಿಬಂದಿದೆ.