ನವದೆಹಲಿ, ನ. 03 (DaijiworldNews/SM): ಭಾರತದ ಕೋವ್ಯಾಕ್ಸಿನ್ ಗೆ ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ ನೀಡಿದೆ. ಕೋವ್ಯಾಕ್ಸಿನ್ ತುರ್ತು ಬಳಕೆಗೆ ಡಬ್ಲ್ಯು ಹೆಚ್ ಒ ಒಪ್ಪಿಗೆ ಸೂಚಿಸಿದೆ.
ಆ ಮೂಲಕ ಭಾರತದ ಕೋವ್ಯಾಕ್ಸಿನ್ ಗೆ ಜಾಗತಿಕ ಮನ್ನಣೆ ದೊರೆತಂತಾಗಿದೆ. 2 ಡೋಸ್ ಕೋವ್ಯಾಕ್ಸಿನ್ ಪಡೆದಲ್ಲಿ ಇನ್ಮುಂದೆ ವಿದೇಶಕ್ಕೆ ತೆರಳಬಹುದಾಗಿದೆ. ಜಿ 20 ಶೃಂಗ ಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮನವಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಪರಿಗಣಿಸಿ ಈ ಮನ್ನಣೆ ನೀಡಿದೆ.
ತಾಂತ್ರಿಕ ಸಲಹಾ ಸಮಿತಿಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ನಾಲ್ಕು ವಾರಗಳ ಅಂತರಗಳಲ್ಲಿ ಲಸಿಕೆ ಪಡೆಯಬಹುದಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ಉಲ್ಲೇಖಿಸಲಾಗಿದೆ.